ಸಖತ್ ಹಾಟ್ ಮಗಾ!
7:09 pm by shashi sampalli
ಸಣಕಲು ಗಿಡದ
ಸವೆದ ಹಸಿರಿನ ಆಳದಿಂದ
ಹೂವೆಂಬ ಚೆಲುವು ಉಕ್ಕಿ ಬಂದರೆ
ಅದು ಸಖತ್ ಹಾಟ್ ಮಗಾ!
ಹೊಗೆ ಕುಡಿದು ಸುಸ್ತಾಗಿ
ಹೊಯ್ದಾಡಿ, ಹೊರಳಾಡಿ ನಿದ್ದೆಗೆಟ್ಟ
ನಗರದೆದೆಯ ಮೇಲೆ ಕುಡಿಬಿಸಲು ಕುಣಿದರೆ,…
ಸಖತ್ ಹಾಟ್ ಮಗಾ!
ಕಸದ ತೊಟ್ಟಿಯಲ್ಲಿ ಚೀರುವ
ಹಸುಗೂಸಿಗೆ ಪರಿತ್ಯಕ್ತೆ
ಹಾಲುಣಿಸಿ ಅಮ್ಮನಾದರೆ
ಆಗ ಸಖತ್ ಹಾಟ್ ಮಗಾ!
ಕಣ್ಣ ಹೊಳಪ ಸೆಳೆತ ಕಳೆದು
ಮೈಯ ಅಂದದ ಮಿಂಚು ಮರೆಯಾಗಿ
ಮಾಗಿದೆದೆಯಲ್ಲೂ ಮತ್ತೊಂದು ಜೀವವ ಕಂಡು
ಪ್ರೀತಿ ಉಕ್ಕಿದರೆ,… ಮಗಾ
ಅದು ಸಖತ್ ಹಾಟ್ !
ee nimma kavana odida mele nimma comment ge nanna sampurna sammati ide!
’sakhat hOt maga…’ tumba ishta aytu.
ಶಶಿ ಸಂಪಳ್ಳಿಯವರೆ,
“ಕಣ್ಣ ಹೊಳಪ ಸೆಳೆತ ಕಳೆದು
ಮೈಯ ಅಂದದ ಮಿಂಚು ಮರೆಯಾಗಿ…”
ಈ ನಿಮ್ಮ ಕವನದ ಮೂರನೇ ಪದ್ಯ ನನಗೆ ತುಂಬಾ ಹಿಡಿಸಿತು.
ಧನ್ಯವಾದಗಳೊಂದಿಗೆ,
ಬ್ರಹ್ಮಾನಂದ.ಎಚ್.ಎನ್.
ಧನ್ಯವಾದ ಚೇತನಾ ಮತ್ತು ಬ್ರಹ್ಮಾನಂದ್ ಅವರಿಗೆ….
ಶಶಿ,
’ಮೆಟ್ರೋ’ ಮೂವೀಯ ಸೀಕ್ವೆಲ್ ಗೆ ಟೈಟಲ್ ಟ್ರಾಕ್ ಆಗಲಿಕ್ಕೆ ಸರಿಯಾಗಿದೆ. ಸಾಲುಗಳು ಚುರುಕು ಮುಟ್ಟಿಸುತ್ತವೆ - ನಾಲಗೆಗೂ, ಮನಕ್ಕೂ!
- ಟೀನಾ
ಆತ್ಮೀಯ ಶಶಿಯವರೇ,
ಕವನ ಓದಿದೆ,
ಕಸದ ತೊಟ್ಟಿಯಲ್ಲಿ ಚೀರುವ
ಹಸುಗೂಸಿಗೆ ಪರಿತ್ಯಕ್ತೆ
ಹಾಲುಣಿಸಿ ಅಮ್ಮನಾದರೆ
ಆಗ ಸಖತ್ ಹಾಟ್ ಮಗಾ!
ವಾಹ್.. ಇಂದಿನ ಜನಕ್ಕೆ ಹೇಳಿಮಾಡಿಸಿದ ‘ಮಿರ್ಚಿ’ ಕವನ!
ಆದ್ರೆ ಕವನದ construction style ಬೇರೆ ಯಾವುದೋ ಒಂದು ಕವನಕ್ಕೆ ಹೋಲಿಕೆಯಾದಂತೆ ಅನಿಸುತ್ತಿದೆ… But am not getting it right now
anyways… ಶಶಿ ‘ಸಖತ್ ಕೂಲ್ ಮಗಾ’ I liked it…
Dear Shashi,
Hot maga kavana tumba chennagide. bahala teevravagi yochange madtira. hagagi ishtondu samvedane iro padya barediddira. great.
regards
vinod