ನನ್ನ ಇಷ್ಟದ ಲೇಖಕ ಮಿಲನ್ ಕುಂದೇರಾನ ‘unbearable lightness of being’ ಓದ್ತಾ ಆತನ, “metaphors are dangerous… a single metaphor can give birth to love” ಸಾಲು ತಲೆ ಸುತ್ತು ಬರಿಸಿಬಿಟ್ಟಿತು! ಹಾಗೇ ‘ನೀಲು’ ಸಹವಾಸ ಮಾಡಿ ಕಲಿತ ಕೆಲವು ‘ಮೋಹ’ಕ ಮಾತುಗಳೂ ಸೇರಿ ಒಟ್ಟಾರೆ ಕೆಲವು ದಿನಗಳಿಂದ ಹುಟ್ಟಿಕೊಂಡಿರುವ ಕೆಲವು ಮೆಸೇಜು, ಮೇಲ್ (!) ಸ್ಟೇಟಸ್ ಮೆಸೇಜುಗಳು ಇಲ್ಲಿವೆ.
* ಈ ಸಂಜೆಗೆ
ನಿನ್ನ ಮಾತು-ಕತೆ
ತರುವ
ರಂಗಿಗೆ ಕಾಮನ
ಬಿಲ್ಲು ಕೂಡ ನಾಚಿ
ನೀರಾಗುವುದು ಎಂದರೆ
ನಂಬುವೆಯಾ?
…….
* ಮಿಂಚಿನ ನಿಚ್ಛಳ
ರೋಷವನ್ನೂ
ಬೆಳದಿಂಗಳಾಗಿಸುವ
ಚಂದ್ರನಿಗೆ
ಸೋಲದಿರಲಿ ಹೇಗೆ?
……
* ಅಲ್ಲಿ
ಅವಳ ಕಣ್ಣ
ಬಾನಲ್ಲಿ ಮಿಂಚು…
ಇಲ್ಲಿ
ಈ ಎದೆಯ
ಅಂಗಳದಲ್ಲಿ
ಮೋಹಕ ಮುಂಗಾರು!
……
* ಬಸವನಹುಳು
-ವಿನ ಬೆನ್ನೇರಿದ
ಅದರ ನೆಲೆ
ಅಂತೆ
ನನಗವಳು!
……
* ನಿನ್ನ ತುಂಬು
ಕೆನ್ನೆಗೆ ಮುತ್ತಿಡುವ
ಬೆಳಗಿನ
ಎಳೆಬಿಸಿಲು ನನ್ನಲ್ಲಿ
ಹುಟ್ಟಿಸುವ ಅಸೂಯೆಯ
ಆಳ ತಿಳಿದರೆ
ನೀ ಬಿಚ್ಚಿಬೀಳುವೆ!
.……
July 1, 2008 at 5:26 am
ನಿಮ್ಮ ಅಸೂಯೆಯ ಆಳ ತಿಳಿಯಲು ಹೋಗಿ ಉಸಿರು ಕಟ್ಟಿ ಹೋಯಿತು!!
ಅದ್ಭುತವಾಗಿದೆ…!!
July 1, 2008 at 5:39 am
ಇಷ್ಟವಾದವು ಸಾಲುಗಳು
August 6, 2008 at 8:56 pm
paravagilla tumba chennagi barididira… keep it up
August 28, 2008 at 2:49 pm
aahaa!