ಕೃಷ್ಣ ಪದ್ಯಗಳು…

1. ಶ್ರಾವಣ ಪ್ರೀತಿ

ಅವನೆಂದರೆ

ಮೋಹ,…

ಆಷಾಢದ ಕೆಣಕುಗಾಳಿ

ಹೊತ್ತು ತಂದ

ಹಠಮಾರಿ ಮಳೆ

ನಡುವೆ

ಹನಿ ಕಡಿಯದ ಶ್ರಾವಣ-

ಪ್ರೀತಿ!!

 

2. ಕೃಷ್ಣ ಮೋಹ

ಅವನ ಕಣ್ಣ ತುಂಬ

ಜೀವ ಪ್ರೀತಿಯ

ಪ್ರವಾಹ…

ಕೊಚ್ಚಿ ಹೋದವರೆಷ್ಟೋ!

 

ಯುಗ- ಯುಗಗಳು

ಗತಿಸಿದರೂ

ಆ ಮೋಹ ಬತ್ತಲಾರದ

ಗಂಗೆ!!

 

3. ನಿವೇದನೆ

ಅವಳೋ-

ವಸಂತನ ಪರಾಕಾಷ್ಠೆ;

ಮುಂಗಾರಿನ

ಮೊದಲ

ಮಳೆಯ

ಹುಡುಗಿ!

ನಾನೋ-

ಶರದೃತುವಿನ ಶರ:

ಮತ್ತೇರಿದ

ಮಳೆಯ

ಶ್ರಾವಣದ

ಹುಡುಗ!

 

ನಮ್ಮಿಬ್ಬರದು

ಭಾದ್ರಪದದ

ಬಿಸಿಲು- ಮಳೆ

ಕಣ್ಣಾಮುಚ್ಚಾಲೆಯ

ಪ್ರೀತಿ!!

6 Responses to “ಕೃಷ್ಣ ಪದ್ಯಗಳು…”

  1. Tina Says:

    ಶಶೀಈಈಈ,

    Now you are in your element. ಇಂಥ ಸಾಲುಗಳನ್ನೆ ಇಲ್ಲಿ ನಾನು ಹುಡುಕ್ತಿದ್ದಿದ್ದು ಮಾರಾಯ. ಕುವೆಂಪುಕಟ್ಟೆ, ಅಲ್ಲಿ ಕೇಳಿದ, ಓದಿದ ನಿನ್ನ ಕವಿತೆಗಳು ನೆನ್ಪಾಗ್ಬಿಡ್ತು!!

  2. chetana chaitanya Says:

    ವಾಹ್!

  3. ugamasrinivas Says:

    padya chennagide
    ugama srinivas

  4. malnaad hudgi Says:

    chuper… chuper….

  5. sindhu Says:

    ಶಶೀ,

    ಪದ್ಯಗಳು ಗಮ್ಮತ್ತಾಗಿವೆ. ಇಷ್ಟ ಆಯಿತು.

    ಮೋಹ, ಪ್ರೀತಿಯ ಸಾಲುಗಳನ್ನ ಎಷ್ಟು ಆರ್ದ್ರವಾಗಿ ಬರೆಯುತ್ತೀರಿ..

    ಪ್ರೀತಿಯಿಂದ
    ಸಿಂಧು

  6. shashi sampalli Says:

    @ ಟೀನಾ-

    ನಿನ್ನ ಕಾಮೆಂಟ್ ಓದಿ ಮತ್ತೆ ಕುವೆಂಪು ಕಟ್ಟೆಯ ಚರ್ಚೆಗಳು, ರಶೀದ್, ಡಿಆರ್, ಲಂಕೇಶ್, ಅನಂತಮೂರ್ತಿ, ತೇಜಸ್ವಿ, ವಿಭಾ, ವಿಸಾಜಿ, ಕಿರಣ, ರಮೇಶ, ಗೌಡ,…. ಎಲ್ಲಾ ನೆನಪುಗಳ ಮಹಾಪೂರ… ಥ್ಯಾಂಕ್ಸ್ ನೆನಪಿಸಿದ್ದಕ್ಕೆ..

    @ ಚೇತನಾ,

    ಖುಷಿ!

    @ ಉಗಮ್ಸ್
    ಓಯ್ ನೀನು ಓದಿದ್ಯಾ… ವಾಹ್!

    @ ಮಲ್ನಾಡ್
    ಥ್ಯಾಂಕ್ಯು, ಥ್ಯಾಂಕ್ಯೂ..

    @ ಸಿಂಧೂ,
    ನಿಮಗೆ ಇಷ್ಟವಾಗಿದ್ದಕ್ಕೆ ಖುಷಿ!

Leave a Reply