ಗೆಳತಿ,
ಇಲ್ಲೀಗ ಚಳಿಯ ಕಾಲ;
ಚುಮು- ಚುಮು ಬೆಳಗು,
ಮಂಜು ಕವಿದ ಬೀದಿ,
ಮಂಕಾದ ಸೂರ್ಯ,
ಜಡ್ಡುಬೀಳುವ ಮನಸಿನ ಕಾಲ.
ಆದರೆ,
ಅದಾವುದೂ ಕಾಣದು ಇಂದೇಕೋ
ಮುತ್ತಿದ ಕಾರ್ಮೋಡ,
ಅಕಾರಣ ಸುರಿವ ಸೋನೆ,
ಬಿಸಿಲಿದ್ದರೂ ಥಳ-ಥಳಿಸದ ಬೆಳಗು,..
ರಾತ್ರಿ ಇಡೀ ರೆಪ್ಪೆ ಹಚ್ಚದೆ
ಮುಂಬೈ ದಾಳಿಯ ಸುದ್ದಿ ಬರೆದು
ಬಂದವಗೆ,
ಯಾಕೋ
ಇಂದು ನಿನ್ನೆಯಂತಿಲ್ಲ…
ಕಾಲದಂತೆಯೇ.
ಅಕಾಲ ಕಾಲದ ಹೊತ್ತಿನಲ್ಲಿ
ನಾಳೆಗಳ ಮೇಲೆ ಹೇಗೆ
ಭರವಸೆ ಇಡಲಿ ಹೇಳೆ?

ಡಿಸೆಂಬರ್ 5, 2008 at 10:49 am
poem is simply superb .. .
ಡಿಸೆಂಬರ್ 28, 2008 at 12:29 pm
ಭರವಸೆ ಇಡಲಿ ಹೇಗೆ…? ಪದ್ಯ ನಿಜಕ್ಕೂ ನನ್ನನ್ನು ತುಂಬಾ ಭಾವುಕನನ್ನಾಗಿಸಿತು…
January 9, 2009 at 10:23 am
simply superb….
ಏಪ್ರಿಲ್ 4, 2009 at 12:58 pm
simply superb