ರೆಕ್ಕೆ ಬಿಚ್ಚಿ, ಬಾನಿಗೆ
ಚಿಮ್ಮಿದ ಹಕ್ಕಿ
ಕಂಪಾಸ್ ಮರೆತು
ಮತ್ತೆ ಗೂಡಿಗೂ
ಹಿಂತಿರುಗಲಿಲ್ಲ!!
***
ಕಾಮನಬಿಲ್ಲಿನ
ಹೂವ ಮುಡಿಯುವ
ಆಸೆ ಕೈಗೂಡದೆ
ಒಂದೇ ಸಮನೆ ರೋತೆ
ತೆಗೆದಿದೆ ಮೋಡ… !!
***
ಅವಳ ಮೆಸೇಜು
ಬರದೆ ಮೊಬೈಲ್ ಗೆ ಈಗ
ಸಿಟ್ಟು..
ಮೌನಕ್ಕೆ ನಿರ್ಜೀವ
ಬ್ಯಾಟರಿ ನೆಪ ಅಷ್ಟೆ!
***
ನಿನ್ನ ಪರೀಕ್ಷಿಸಲು
ನಾ ಕವಿತೆ
ಬರೆದೆ ಎಂದಳು ಅವಳು…
ನನಗೋ ಅವಳೇ
ಎಂದೆಂದೂ ಮುಗಿಯದ ಕಥೆ!!
***
ಮಳೆ ಬಿದ್ದ ಕ್ಷಣ
ಮಣ್ಣು ಒದ್ದೆ
ಕಣ್ಣಿನ ರೆಪ್ಪೆ
ತೆರೆದಂತೆ
ಅರಳುವ ಹಸಿರು
ಕಾಮನಬಿಲ್ಲು!
***
ಕಾಡಿನ ತುಂಬ
ಈಗ ಮಂಗನ ಮದುವೆ
ಆಕಾಶದಲ್ಲಿ
ಕಾಮನಬಿಲ್ಲು, ಮನ್ಮಥ ಲಾಸ್ಯ!!
***
ನನ್ನ ಕಣ್ಣ ದಿಟ್ಟಿಸಬೇಡ
ಎಂದಳು ಅವಳು…
ಕಡಲ ಒಡಲಾಳದ
ನಕ್ಷತ್ರಮೀನ
ತೋರಿ ನಸುನಕ್ಕೆ!!
***
June 15, 2009 at 11:02 am
ಚೋ ಸ್ವೀಟು ಸಾಲುಗಳು!..ಹನಿಗಳ ಹಿಂದಿರುವ ಅರ್ಥ ತಿಳಿಯೋ ಮೊದಲೇ, ಆ ಹನಿಗಳನ್ನು ಓದುತ್ತಲೇ ಖುಷಿಗೊಂಡಿತ್ತು ಎನ್ನ ಮನ..! ಧನ್ಯವಾದಗಳು ಸರ್….
-ಚಿತ್ರಾ
June 18, 2009 at 8:25 pm
super!:) my favourites r the first 3!:))