ದೇವರ ಕೊಲೆ

ಖುಷಿಯಲ್ಲಿ ಬೀಗುತ್ತಿದ್ದ ಆತ;

ಬಗಲಲ್ಲಿ ಅವಚಿದ್ದ ಅದರ

ಚಕ್ಕಳ ಸುಲಿದ ಹುಷಾರಾಗಿ,…

ಚಲುವಿನ ಚರ್ಮದ ಒಳ

ಬಾಡಿನ  ಊಟವೂ ಆಯಿತು,

ರುಚಿಕಟ್ಟಾಗಿ,…

ಮಾರನೆ ದಿನ;

ಮನೆಯ ಮಾಡಿನ ಮೇಲೆ

ಒಣಗಿ ಕರಟಿದ್ದ ಚಕ್ಕಳ ತಂದ,…

ಹದ ಹಾಕಿದ ಮೆದುವಾಗಿ,

ತಲೆ, ಬೆನ್ನು, ಹೊಟ್ಟೆಯ

ಆಕಾರ ನೋಡಿದವಗೆ ಸಮಾಧಾನ…

ಅಷ್ಟು ಹುಲ್ಲು ತಂದು

ಮುದುರಿ ತೊಗಲಿಗೆ ತುಂಬಿದ

ರೂಪತಾಳಿತು ಮತ್ತೆ ನಿಜದಂತೆ!

ಕಂಡು; ಕುಣಿದು-ಕುಪ್ಪಳಿಸಿದ

ಸತ್ತ ಜೀವಕೆ ರೂಪ ನೀಡಿದೆ,

ಸಾಕಿನ್ನು ಸಾಧನೆಗೆ ಎಂದು.

ನಿಧಾನಕ್ಕೆ ಜಗುಲಿಗೇರಿಸಿ,

ಹೂ-ಹಾರ ಹಾಕಿದ,…

ಉತ್ಸವ- ಯಾತ್ರೆ ಗರಿಗೆದರಿದವು,

ಈಗದು ಅವನನ್ನೂ ಮೀರಿದ ಸರ್ವಶಕ್ತ!

……

Advertisements

3 thoughts on “ದೇವರ ಕೊಲೆ

 1. ಶಶಿ!!
  ಬಹಳ ಅದ್ಭುತವಾಗಿದೆ!!
  ಪ್ರಕೃತಿಯನ್ನು ಅನುಭವಿಸಿ, ತಿಂದು ತೇಗಿ, ಹಾಳುಗೆಡವಿ, ನಂತರ ಕೃತಕವಾಗಿ ನಿರ್ಮಿಸಿ ಬೀಗುವ ಮನುಷ್ಯನ ಕ್ರೂರತೆ ಅನನ್ಯವಾದುದು!!
  ನಿಮ್ಮ ಯೋಚನಾ ಲಹರಿ ಒದಗಿದ ಈ ವಸ್ತು, ಹಾಗು ಅದಕ್ಕೆ ಪೂರಕವಾದ ನಿಮ್ಮ ಪ್ರತಿಭೆಯ ಮೂಸೆಯಿಂದ ಹೊಮ್ಮಿದ ಈ ಕವನ ನಿಜಕ್ಕೂ ಮನೋಜ್ಞವಾಗಿದೆ… ಎಲ್ಲರ ಮನವನ್ನೂ ತಟ್ಟುವಂತಹದ್ದು!!
  ಅನಂತ ಧನ್ಯವಾದಗಳು, ನನ್ನನ್ನೂ ಈ ದಾಟಿಯ ಯೋಚನೆ ಹಚ್ಚಿದ್ದಕ್ಕೆ!!

  Like

 2. ಪ್ರಿಯ ಶಶಿ,

  ನಿಮ್ಮ ಕವಿತೆಗಳು ಯಾವತ್ತೂ ನನ್ನನ್ನು ಬೆರಗಿನ ಕಟ್ಟೆಯಲ್ಲಿ ಕೂರಿಸುತ್ತವೆ. ಅಲ್ಲಿ ಕೂತು ಪದಪದಗಳನ್ನೂ ನೆನೆದು ಹೊಸಹೊಸದಾಗಿ ನೋಡಿ, ಅಚ್ಚರಿ ಪಡುತ್ತ ಕೂರುತ್ತೇನೆ. ತುಂಬ ಇಷ್ಟವಾಗುತ್ತದೆ. ಕವಿತೆ ಮತ್ತು ನನ್ನನ್ನು ಬೆರಗಲ್ಲಿ ತೇಲಿಸುವ ನೀವು.

  ಒಣಗಿ ಕರಟಿದ್ದ ಚಕ್ಕಳ..
  ರೂಪತಾಳಿತು ಮತ್ತೆ ನಿಜದಂತೆ..
  ಈಗದು ಅವನನ್ನೂ ಮೀರಿದ ಸರ್ವಶಕ್ತ..!

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s