ಈ ವೇಷ ನೋಡದಿರು ಅಮ್ಮಯ್ಯಾ

ಬೆಂಗಳೂರಿನ ಮಲ್ಟಿನ್ಯಾಷನಲ್ ಮಯ ಕೋರಮಂಗಲದ ಪ್ರಮುಖ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆಯಂಚಿನ ಪುಟ್ಟ ಗುಡಿ ಮುಂದೆ ಕೈಮುಗಿದು ನಿಂತ ಟೈಟ್ಸ್ ತೊಟ್ಟ ಮಾಡ್ ಯುವತಿ ಕಣ್ಣಿಗೆ ಬಿದ್ದಳು. ನೋಡುತ್ತಲೇ ಆಕೆ ಯಾವುದೋ ಸಾಫ್ಟ್ ವೇರ್ ಅಥವಾ ಬಿಪಿಒ ನೌಕರಳು ಎಂಬುದು ಗೊತ್ತಾಗುತ್ತಿತ್ತು. ಲೋ ವೇಸ್ಟ್ ಜೀನ್ಸ್, ಡೀಪ್ ನೆಕ್ ಟಾಪ್ ಅದನ್ನು ಖಾತ್ರಿಪಡಿಸುವಂತಿದ್ದವು. ಆದರೆ, ಆಶ್ಚರ್ಯವಾಗಿದ್ದು ಅದಕ್ಕಲ್ಲ! ಅತ್ಯಾಧುನಿಕ ಯುವತಿಯಾಗಿದ್ದ ಆಕೆ ಕಲ್ಲಿನ ಎದುರು ನಿಂತು ಅಷ್ಟೊಂದು ಭಯ-ಭಕ್ತಿಯಿಂದ, ದೈನ್ಯದಿಂದ ನಿಂತಿರುವ ಭಂಗಿ ಒಮ್ಮೆಲೇ ನಗು ಮತ್ತು ಕನಿಕರ ಹುಟ್ಟಿಸಿತು.

ನಗು ಏಕೆಂದರೆ ಆಕೆ ನಿಂತಿರುವ ತಾಣಕ್ಕೂ, ಭಾವಕ್ಕೂ ಆಕೆಯ ವೇಷಭೂಷಣಕ್ಕೂ ವ್ಯತಿರಿಕ್ತ ಸ್ಥಿತಿ. ಕನಿಕರ ಏಕೆಂದರೆ, ತಂತ್ರಜ್ಞಾನದ ಕೀಲಿ ಕೈ ಹಿಡಿದುಕೊಂಡ ಆ ಶಿಕ್ಷಿತ ಯುವತಿ ಅಷ್ಟೊಂದು ದೈನೇಸಿ ಸ್ಥಿತಿಯಲ್ಲಿರುವುದು ಆಕೆಯ ಬೌದ್ಧಿಕ ಭೋಳೇತನವನ್ನು ಅನಾವರಣಗೊಳಿಸುತ್ತಿತ್ತು.  ಆಕೆ ಪ್ರತಿನಿಧಿಸುತ್ತಿರುವ ಜಗತ್ತಿನ ಹಿನ್ನೆಲೆಯಲ್ಲಿ ಅದು ಕೇವಲ ಆಕೆಯೊಬ್ಬಳ ವೈಯಕ್ತಿಕ ಸಂಗತಿ ಎಂದುಕೊಳ್ಳುವುದು ಕೂಡ ಸಾಧ್ಯವೇ ಇರಲಿಲ್ಲ.

ವೈಚಾರಿಕತೆಯ ಸ್ಪರ್ಶವೇ ಇಲ್ಲದ ಮೊದ್ದುಮಣಿಗಳನ್ನು ತಯಾರು ಮಾಡುವುದು ಒಂದು ಶಿಕ್ಷಣವೇ? ವ್ಯಕ್ತಿಗೆ ಸಿದ್ಧ ಸೂತ್ರಗಳ ಗಿಣಿಪಾಠ ಒಪ್ಪಿಸುವುದನ್ನು ಕಲಿಸುವುದನ್ನು ಶಿಕ್ಷಣ ಎನ್ನಲು ಸಾಧ್ಯವೇ? ಎಂಬಂತಹ ಮೂಲಭೂತ ಪ್ರಶ್ನೆಗಳನ್ನು ಆ ನೋಟ ಎತ್ತಿದ್ದರಿಂದ ಇಲ್ಲಿ ಇಷ್ಟು ಹೇಳಬೇಕಾಯಿತು.

Advertisements

3 thoughts on “ಈ ವೇಷ ನೋಡದಿರು ಅಮ್ಮಯ್ಯಾ

 1. ಕಲ್ಲನ್ನು ನೋಡಿದಾಗ ಕೈಮುಗಿಯುವುದು ಅವರವರು ಬೆಳೆದು ಬಂದ ಸಂಸ್ಕೃತಿ, ಮತ್ತು ಬೆಳೆಸಿಕೊಂಡ ನಂಬಿಕೆ. ವೇಷಭೂಷಣ – ಹೊಟ್ಟೆಪಾಡಿಗೆ. ಇದೆರಡನ್ನು ಒಟ್ಟಿಗೆ ನೋಡಿದ್ದೀರಿ ನೀವು.

  Like

 2. ನಮಸ್ಕಾರ.

  ನನಗೆ ದೇವನಿದ್ದಾನೆಂಬ ನಂಬಿಕೆ ಇಲ್ಲ. ಆದರೆ, ಅಂತಹ ನಂಬಿಕೆಯ ಬಗಗೆ ಸೋಜಿಗ, ಗೌರವ, ಭಯ ಇದೆ. ದೈವದ ಮೇಲಿನ ನಂಬಿಕೆ ಗಾಂಧಿಯನ್ನೂ ಸೃಷ್ಟಿಸಬಲ್ಲದು, ಬಿನ್ ಲ್ಯಾಡೆನ್ ಅನ್ನೂ ಸೃಷ್ಟಿಸಬಲ್ಲದು.

  ಒಬ್ಬ ತರುಣಿಯ ವೇಷ ಭೂಷಣದಿಂದಲೇ, ಆಕೆ ಹೀಗೆಯೇ ಯೋಚಿಸ ಬೇಕು, ಇಲ್ಲದಿದ್ದರೆ ಆಕೆ ವೈಚಾರಿಕತೆಯ ಸ್ಪರ್ಶವೇ ಇಲ್ಲದ ಮೊದ್ದುಮಣಿ ಎನ್ನುವ ನಿಮ್ಮ ಅಭಿಪ್ರಾಯ ನನಗೆ ಸರಿ ಎನ್ನಿಸುವುದಿಲ್ಲ.

  ನನ್ನ ಅತ್ಯಂತ ಆಪ್ತ ಮಿತ್ರರಲ್ಲಿ ಒಬ್ಬರು ಐ.ಐ.ಟಿ.ಯಲ್ಲಿ ಓದಿದ ಬ್ರಿಲಿಯಂಟ್ ಎಂಜಿನಿಯರ್ ಮತ್ತು ನನಗೆ ತಿಳಿದಿರುವವರಲ್ಲೆಲ್ಲಾ ಅತ್ಯಂತ ಬುದ್ಧಿವಂತರು. ಆದರೆ ಆಕೆ ಒಬ್ಬ ಯೆಹೋವಾಸ್ ವಿಟ್ನೆಸ್ ಸಹ. ನನ್ನನ್ನೂ ಸಹ ಆ ನಂಬಿಕೆಯ ಫರಿದಿಗೆ ಸೆಳೆದುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ನಾನೂ ಸಹ ಆಕೆಯ ನಂಬಿಕೆಗಳ ಅಸಂಬದ್ಧತೆಯನ್ನು ಎತ್ತಿ ತೋರಿಸುತ್ತಲೇ ಇರುತ್ತೇನೆ. ಅಂತಹ ಬುದ್ಧಿವಂತ, ವಿದ್ಯಾವಂತ ಮಹಿಳೆಯಲ್ಲಿರುವ ನಂಬಿಕೆಯ ಬಗೆಗೆ ನನಗೆ ಸದಾ ವಿಸ್ಮಯವೆನ್ನಿಸುತ್ತದಾದರೂ, ಒಂದು ಕ್ಷಣ ಸಹ ಆಕೆ ‘ವೈಚಾರಿಕತೆಯ ಸ್ಪರ್ಷವೇ ಇಲ್ಲದ ಮೊದ್ದುಮಣಿ’ ಎಂದೆನಿಸಿಲ್ಲ.

  ನಾಸ್ತಿಕನಾದ ರಿಚರ್ಡ್ ಡಾಕಿನ್ಸ್‌ನ ಪುಸ್ತಕಗಳು (ಉದಾಹರಣೆಗೆ ದಿ ಗಾಡ್ ಡೆಲ್ಯೂಷನ್) ನನಗೆ ಮೆಚ್ಚಿಗೆಯಾದರೂ, ಆತನ ಟೋನ್ ಇಷ್ಟವೆನ್ನಿಸುವುದಿಲ್ಲ.

  ವಂದನೆಗಳೊಂದಿಗೆ,

  ಶೇಷಾದ್ರಿ

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s