ಹನಿ ಡ್ಯೂ ಕಣ್ಣಿನ ಹುಡುಗಿ!

836 ಕಿ.ಮೀ. ದೂರವನ್ನು ಒಂದೇ ಉಸಿರಿಗೆ ಅವಡುಗಚ್ಚಿಕೊಂಡು ಕ್ರಮಿಸಿದ್ದೆ.

ಸಿಲಿಕಾನ್ ಸಿಟಿಯಿಂದ ರಾತ್ರಿ ಎಡಿಷನ್ ವರ್ಕ್ ಮುಗಿಸಿ ಕಣ್ಣ ರೆಪ್ಪೆ ಜೋಡಿಸದೇ ಕಾರು ಏರಿದ್ದೆ. ತುಮಕೂರಿನಲ್ಲಿ ತಟ್ಟೆ ಇಡ್ಲಿ, ಕೊಪ್ಪಳದಲ್ಲಿ ಜೋಳದ ರೊಟ್ಟಿ ಊಟ, ಸಂಜೆ ಹುಮ್ನಾಬಾದ್ನಲ್ಲಿ ಟೀ ಕುಡಿದದ್ದು ಬಿಟ್ಟರೆ ಉಳಿದದ್ದೆಲ್ಲಾ ನಿದ್ದೆ, ನಡು- ನಡುವೆ ಪಿಚ್ಚಳ್ಳಿ ಶ್ರೀನಿವಾಸ್, ಮುಂಗಾರು ಮಳೆ, ಗೆಳೆಯದ ಈ ಸಂಜೆ ಯಾಕಾಗಿದೆ,… ಹೀಗೆ ಹಾಡು. ಡ್ರೈವರ್ ರವಿ ಒಂದೇ ಸಮನೆ ಕಲ್ಲುಗುಂಡಂತೆ ಕೂತು 100ರ ಮೇಲೇ ಗಾಡಿ ಓಡಿಸುತ್ತಿದ್ದರು. ಅಂತೂ ಸಂಜೆ 5ಕ್ಕಾದರೂ ತಲುಪಬಹುದು ಎಂದುಕೊಂಡದ್ದು ಸುಳ್ಳಾಯಿತು. ದಾರಿಯಲ್ಲಿ ಕೊಪ್ಪಳದಲ್ಲಿ ಸಿಕ್ಕ ಮೆಡಿಸಿನ್ ಕಲ್ಲಂಗಡಿ ಹಣ್ಣಿನ ಹೊಲ, ಅದರ ಮಾಲೀಕ ಸುರೇಶ, ಆ ಊರನ್ನೇ ಗುಳೇ ಕಳಿಸಿದ್ದ ಬರ,.. ಹೀಗೆ ಎಲ್ಲವುಗಳ ದರ್ಶನ ಪಡೆಯುವ ಹೊತ್ತಿಗೆ ಅಲ್ಲೇ ಸಂಜೆಯಾಗಿತ್ತು.

ಅಂತೂ ಕೋಟೆ- ಕೊತ್ತಲಗಳ ನಗರ ಬೀದರ್ ತಲುಪುವ ಹೊತ್ತಿಗೆ ರಾತ್ರಿ 11. ರಾತ್ರಿ ಲಾಜ್ನಲ್ಲಿ ಮಲಗಿ, ಬೆಳಿಗ್ಗೆ ಆರಕ್ಕೇ ಎದ್ದು ಹೊರಟದ್ದು ಗುಂಬಜ್ಗಳ ದಾರಿಯಲ್ಲಿ. ಗತಕಾಲದ ಹತಾಶ ಅವಶೇಷಗಳಂತಹ ಅವುಗಳನ್ನು ಹಾದುಕೊಂಡು ಅಲ್ಲಿನ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ನೋಡಿ ಮುಂದೆ ಹೋದರೆ ಸಿಕ್ಕದ್ದೇ ಆ ಊರು, … ಊರಿನ ಯಜಮಾನ ಯಾದಗೀರರ ಮನೆಗೆ ಹೋಗಿ ಊರಿನ ಮಳೆ- ಬೆಳೆ ಕೇಳುತ್ತಲೇ, ಬೆಂಗಳೂರಿನ ಮಂದಿ ಎಂದು ನಮ್ಮನ್ನು ಒಳ ಕರೆದು ಕುಡಿಯಲು ತಣ್ಣನೆ ಮಜ್ಜಿಗೆ ಕೊಟ್ಟು, ಜೊತೆಗಿದ್ದ ಗೆಳೆಯ ದೇವು ಪಕ್ಕಾ ಬೀದರ್ ಮಾತನ್ನೇ ಉಸಿರಾಡುವವನಾದ್ದರಿಂದ ಅವರೊಂದಿಗೆ ಮಾತನಾಡುವುದು ನಮಗೆ ಸಮಸ್ಯೆಯಾಗಲಿಲ್ಲ! ನಿಧಾನಕ್ಕೆ ಮಾತು ಮುಂದುವರಿಯುತ್ತಿದ್ದಂತೆ ಕ್ಯಾಮರಾ ತೆಗೆದು ಯಾದಗೀರರ ಚಿತ್ರ ಕ್ಲಿಕ್ಕಿಸಿದೆ. ಕ್ಯಾಮರಾ ಫ್ಲಾಷ್ ಹೊಳಪಿಗೆ ಒಳಗಿದ್ದ ಅವಳು ಹೊರಬಂದಳು!

ಸಹಜವಾಗಿ ತಿರುಗಿ ನೋಡಿದೆ! ಒಂದು ಕ್ಷಣ ದಂಗಾದೆ, ಅವಳ ಬುರ್ಖಾದೊಳಗಿಂದ ಅರ್ಧವೇ ಕಾಣುತ್ತಿದ್ದ ಹೊಳೆಯ ಕೆನ್ನೆಗಳ ಕಂಡು! ಆಕೆಯ ಆ ನೋಟ, ನಗು, ಕಣ್ಣ ಮಿಂಚು; ಮೊದಲ ನೋಟದಲ್ಲೇ ಎಂತಹವರನ್ನೂ ಥಟ್ಟಂತೆ ಹಿಡಿದಿಡಬಲ್ಲ ಕಣ್ಣುಗಳಲ್ಲಿ ಎಂತದೋ ಮಾರ್ದವತೆ, ಥೇಟ್ ಜೇನು ತೊಟ್ಟಿಕ್ಕುವಂತೆ! ಜೇನ ಹನಿಯೊಂದು ಸೂರ್ಯಪ್ರಭೆಗೆ ಹೊಳೆಯುವ ಘಳಿಗೆಯನ್ನೇ ತಂದು ಆಕೆಯ ಕಣ್ಣಿಗೆ ಕಟ್ಟಿದಂತೆ ಹೊಳಪು! ಗುಲಾಬಿ ಕೆನ್ನೆಯ ಜೊತೆ ಕಡುಗಪ್ಪು ಕಣ್ಣರೆಪ್ಪೆಯ ಸಾಲು…. ನೀಳ ಮೂಗು,…

ಆ ಕ್ಷಣ ನನ್ನನ್ನೇ ನಾನು ಎಷ್ಟೊಂದು ಮರೆತೆನೆಂದರೆ, ಒಂದೇ ಏಟಿಗೆ ಒಂದು ದಿನ ಪ್ರಯಾಣದ ದಣಿವು, ಎರಡು ದಿನದ ನಿದ್ದೆಯಿಲ್ಲದ ಸುಸ್ತು,.. ಬೀದರ್ ಬಿಸಿಲ ಧಗೆ,.. ಊಹುಂ ಯಾವುದೂ ಸುಳಿವೂ ಇಲ್ಲದಂತೆ ಮಾಯವಾಗಿದ್ದವು. ಈ ಕ್ಷಣಕ್ಕೇ ಆಕೆಯನ್ನು ಅಪ್ಪಿ ಮುದ್ದಾಡದೇ ಜೀವವೇ ತಾಳದು ಎಂಬಷ್ಟರಮಟ್ಟಿಗೆ ಸೆಳೆತ! ಆ ಸಳೆತ, ಆಕರ್ಷಣೆಯ ಭರದಲ್ಲಿ ಕ್ಯಾಮರಾದಿಂದ ಫೋಟೋ ಕ್ಲಿಕ್ಕಿಸುವುದನ್ನೂ ಮರೆತುಬಿಟ್ಟೆ…

ಗುಂಬಜ್ ಹಾದಿಗುಂಟ..

 

 

 

 

 

 

 

 

 

 

ಆಮೇಲೆ ನಾವು ಮಾತುಕತೆಯ ಬಳಿಕ ಯಾದಗೀರ ಸಾಹೇಬರಿಗೆ ನಮಸ್ಕಾರ ಹೇಳಿ ಹೊರಟೆವು.. ಆದರೆ, ಆಕೆಯ ಕಣ್ಣಿನ ಆ ಹನಿ ಡ್ಯೂ ನೋಟ ಮಾತ್ರ ಹಾಗೇ ಕಣ್ಣ ಕೋಣೆಯಲ್ಲಿ ಅಳಿಸಲಾರದ ಚಿತ್ರಪಟ!

ಮತ್ತೆ ಮೂರೂವರೆ ದಿನ ಅಲ್ಲೇ ಸುಲ್ತಾನರ ಆ ಕೋಟೆಯ ಆಸುಪಾಸಿನ ಊರುಗಳಲ್ಲೇ ಸುತ್ತಾಡಿಕೊಂಡಿದ್ದೆ. ಪ್ರತಿ ದಿನ ರಾತ್ರಿ ವಾಸ್ತವ್ಯಕ್ಕೆ ಬೀದರ್ ಹಗಲಿನ ಓಡಾಟಕ್ಕೆ ಹಳ್ಳಿಗಳು.. ಆದರೆ, ಕಣ್ಣೊಗೆ ಕೂತ ಆಕೆಯ ಚಿತ್ರ ಮಾತ್ರ ಬದಲಾಗದು. ಬೆಳಗಿನ ಕೆಂಪು ಸೂರ್ಯನಿಗೆ ಕ್ಯಾಮರಾ ಹಿಡಿಯಲಿ, ಉರಿಬಿಸಿಲಲಿ ಕಮರಿದ ಹೊಲಗಳ ಕ್ಲಿಕ್ಕಿಸಲಿ, ಸಂಜೆಗೆ ಬತ್ತಿದ ಕೆರೆ- ಕಟ್ಟೆಗಳ ದಂಡೆಯ ಒಂಟಿ ಗೊರವಗಳ ಸೆರೆ ಹಿಡಿಯಲಿ ಆಕೆಯ ನೋಟದಲ್ಲಿ ಬಂದಿಯಾದ ಕಣ್ಣಿಗೆ ಮಾತ್ರ ಬಿಡುಗಡೆಯಿಲ್ಲ!

ಮತ್ತದೇ ಕಣ್ಣು, ರಾತ್ರಿ ದಣಿದು ಬಂದು ಲಾಜಿನ ಲಾಂಜ್ನಲ್ಲಿ ಕೂತು ಹರಟುವಾಗ, ರಾತ್ರಿ ದಣಿವಾರಿಸಿಕೊಳ್ಳಲು ಕಿಕ್ ಏರಿಸುವಾಗ, ಮತ್ತೆ- ಮತ್ತೆ ಅದೇ ಅವಳು! ಉಕ್ಕುವ ಬಿಯರಿನ ನೊರೆಯಂತೆ ಎದೆಯೊಳಗಿನಿಂದ ಚಿಮ್ಮಿ ಬರುವ ಚಿತ್ರ ಅವಳೊಂದೇ!…

ಕೊನೆಗೂ ಎಲ್ಲವನ್ನೂ ಮರೆತೆನೆಂದರೂ ನೋಡು- ನೋಡುತ್ತಿದ್ದಂತೆಯೇ ಯಾವ ಮಾಯೆಯೆಲ್ಲೋ ಅಮ್ಮ ಕರೆದ ದನಿಗೆ ಓಗುಡುತ್ತಾ ಓಡಿದ ಆಕೆಯ ಪುಟ್ಟ- ಪುಟ್ಟ ಪಾದಗಳ ಹೆಜ್ಜೆ ಗುರುತುಗಳನ್ನಂತೂ ಮರೆಯಲು ಸಾಧ್ಯವೇ ಇಲ್ಲ, ಅದೇ ಹನಿ ಹನಿ ಕಣ್ಗಳಂತೆಯೇ… !

Advertisements

12 thoughts on “ಹನಿ ಡ್ಯೂ ಕಣ್ಣಿನ ಹುಡುಗಿ!

 1. ಸ್ಟುಪಿಡ್ ಲೇಖನ. ಇಂಥ ಲೇಖನಗಳನ್ನು ಬ್ಲಾಗಿನಲ್ಲಿ ಬರೆದು ಬರೆದು ಎಸೀತಾರೆ. ಕಣ್ಣಂತೆ, ಹನಿಡ್ಯೂ ಅಂತೆ. ಹೆಣ್ಣುಗಳನ್ನು ಹೇಗೆ ನೋಡ್ತೀರಿ ಅಂತ ಗೊತ್ತಾಯ್ತು.. ಛೇ..

  Like

 2. ನಾಚಿಕೆ ಅಗೊದಿಲ್ಲ್ವ? ಈ ರೀತಿಯ ಲೆಖನ ಬರೆಯೋಕೆ?
  ತಲೆಯಲ್ಲಿ ಬರುವ ಎಲ್ಲಾ ಕೊಳಕುಗಳನ್ನು ಹೀಗೆ ಹೊರಗೆ ಹಾಕೊದೇ ಇಂಥವರ ಬದುಕು. ಬದುಕಿನಲ್ಲಿ ಬರೆ ಭ್ರಮೆ ತುಮ್ಬಿಸಿಕೊಳ್ಳೋಬದಲು ಸ್ವಲ್ಪ ಕ್ರಿಯತ್ಮಕವಾಗಿ ಬದುಕೊದನ್ನು ಕಲಿಯಿರಿ.

  Like

 3. @ radhika and sachin

  ನಿಮ್ಮಿಬ್ಬರ ಕಾಮೆಂಟಿಗೆ ‘ನಾವು ಏನನ್ನೇ ನೋಡಿದರೂ ಅಲ್ಲಿ ಇರುವುದರ ಬದಲಿಗೆ ಬಹುತೇಕ ವೇಳೆ ನಾವಂದುಕೊಂಡದ್ದನ್ನೇ ಕಾಣುತ್ತೇವೆ’ ಎಂಬುದೇ ಉತ್ತರ! ನೀವಿಬ್ಬರೂ ಓದುವ ಸೂಕ್ಷ್ಮತೆಯನ್ನೇ ಮರೆತು ಓದಿ, ಕಾಮೆಂಟ್ ಹಾಕಿದ್ದೀರಿ. ಇನ್ನೊಮ್ಮೆ ಓದಿ,.. ಅರ್ಥವಾದರೆ ಕಾಮೆಂಟ್ ಹಾಕಿ. ಸರಿಯಾಗಿ ಓದುವ ಮುನ್ನವೇ ಬಾಯಿಗೆ ಬಂದಂತೆ ಮಾತನಾಡಬೇಡಿ… ಸ್ಟುಪಿಡ್ ಮತ್ತು ಕೊಳಕರು ಯಾರು ಎಂಬುದು ನಿಮಗಿಂತ ಸೂಕ್ಷ್ಮ ಓದು ಬಲ್ಲವರಿಗೆ ಗೊತ್ತಾಗದೇ ಇರದು!! ಹಾಗಾಗಿ ನಾನೇನೂ ಹೇಳುವುದಿಲ್ಲ.

  @ ಚಿತ್ರಾ…

  ಥ್ಯಾಂಕ್ಸ್..!

  Like

 4. ಚೆನ್ನಾಗಿದೆರಿ. ನಾನೆಲ್ಲೋ ಚೆನ್ದದ ಹುಡುಗಿ ಅಂದು ಕೊಳ್ಳುತ್ತಿದ್ದೆ. ನೋಡುತ್ತಿದ್ದಂತೆ ಆಕೆ ಕಿರಿದಾಗುತ್ತಾ ಪುಟ್ಟ ಹುಡುಗಿಯಾಗಿಬಿಟ್ಟಳು. ಅದು ಶುಭ್ರ,ಸ್ವಚ್ಛ ಕಣ್ಣುಗಳಿರುವಳು. ಘಟನೆ ನಿಜವಾಗಿದ್ದಲ್ಲಿ ಆ ಹನಿ ಡ್ಯೂ ಕಣ್ಣಿನ ಹುಡುಗಿಯ ಫೋಟೋ ತೋರಿಸಿ. ನಾವು ನೋಡಿ ಖುಷಿ ಪಡುತ್ತೀವಿ. 🙂

  Like

 5. ಅಕ್ಷರ ದೇವತೆಯೇ,
  ಓದುಗರ ಹೃದಯ ವಿಶಾಲಿಸು. ಸೂಕ್ಷ್ಮಭಾವಗಳ ಅರ್ಥೈಸಿಕೊಳ್ಳಲನುವಾಗುವಂತೆ ಕರುಣೆ ತೋರು. ವೇಗದ ಓಘಕ್ಕೆ ಮುಖ ಮಾಡಿ ಸಂವೇದನೆ ಕಳೆದುಕೊಳ್ಳುತ್ತಿರುವವರ ಕೈ ಹಿಡಿದು ನಡೆಸು.

  Like

 6. shashi,
  you really disappointed me without taking that photo. forget about a few comments. those souls lack literary sensibilities. if they have missed some words in the article which tell who is the character, it is ok. in my view even if the character you are writing about is a lady, there is no point to criticise. If you are lured by beauty of a girl, so what?

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s