ಕುಂದಾದ್ರಿಯಿಂದ ಕುಪ್ಪಳಿವರೆಗೆ…

ಕುಂದಾದ್ರಿಯ ಹಾದಿಯಲ್ಲಿ...

ಕುಂದಾದ್ರಿಯ ಹಾದಿಯಲ್ಲಿ...

ಮಳೆ ಮೋಹಕೆ ಮೈಯೊಡ್ಡಿ...

ಮಳೆ ಮೋಹಕೆ ಮೈಯೊಡ್ಡಿ...

ಆ ಮೋಡ ಬಾನಲ್ಲಿ ತೇಲಾಡುತಾ...

ಆ ಮೋಡ ಬಾನಲ್ಲಿ ತೇಲಾಡುತಾ...

ಕುಂದಾದ್ರಿಯ ಮೇಲಿಂದ ಮಾದಕ ನೋಟ

ಕುಂದಾದ್ರಿಯ ಮೇಲಿಂದ ಮಾದಕ ನೋಟ

ಹಸಿರು ಹೊನ್ನು...!

ಹಸಿರು ಹೊನ್ನು...!

ಮೊನ್ನೆ ನಾಲ್ಕು ದಿನ ಆಗುಂಬೆ, ಕುಂದಾದ್ರಿ, ಕೊಪ್ಪ, ಕುಪ್ಪಳಿ, ಚಿಬ್ಬಲುಗುಡ್ಡೆ ಸುತ್ತಾಡಿ ಬಂದೆ… ಅಲ್ಲಿನ ಕೆಲವು ಕ್ಲಿಕ್ಕುಗಳು ಈಗ ಇಲ್ಲಿವೆ.. ಎಂದಾದರೂ ಆ ಬಗ್ಗೆ ಬರೆಯುವೆ…. ಸದ್ಯಕ್ಕೆ ಚಿತ್ರ ನೋಡಿ… ಊಹಿಸಿ…!

Advertisements

ಮಳೆಯೋ ಮಳೆ ಎದೆಯೊಳಗೆ….

dropನೀರ ಮೇಲೆ ಅಲೆಯ ಉಂಗುರ…

ಅವಳ ಕಣ್ಣಿನ ತುಂಬ

ಮಿಂಚು ಮಿನುಗುವ ಬೆಳಕು…

ಹನಿಒಡೆದ ಬಳಿಕದ ಹೊಂಬಿಸಿಲ

ಎಸಳು ಕಿರುನಗೆಯ ಮಂದಲೆ.

ಅವನ ಕುಡಿನೋಟದ

ಸಿಡಿಲ ತಾಕಿದ ಕ್ಷಣ

ಪ್ರೀತಿಯ ಮಳೆ…. ಧೋ…

ಮಳೆ-ಮನಸ್ಸುಗಳ

ಪುಲಕ- ಮೈಯೊಳಗೆ!!

ಜೀವ ಪ್ರೀತಿಯ

ಘಳಿಗೆಗೆ ಹನಿಯ ಬೆಳಗು!!

ಮಳೆಯ ಹನಿಯ ಮುದ

ಮಳೆ ಬಂದ ಘಳಿಗೆಮಳೆಯ ನೆನಪು, ನೇವರಿಕೆಗಳು ಜೀವಪ್ರೀತಿಯ ಮನಸ್ಸುಗಳಿಗೆ ಎಂದೂ ಚೈತನ್ಯದಾಯಕವೇ. ಮಲೆನಾಡಿಗರ ಪಾಲಿಗೆ ಮಳೆ ಎಂದರೆ ಬರಿ ಒಂದು ಕಾಲವಲ್ಲ, ಬದಲಾಗಿ ಅದು ಬದುಕಿನ ಒಂದು ನಿಯಮಿತ ಆಚರಣೆ.

ಮುಂಗಾರು ಆರಂಭವಾಗುತ್ತಲೇ ಗಂಡಸರು ಕಂಬಳಿ, ಕೊಡೆ (ಈಗೀಗ ರೇನ್ ಕೋಟ್)ಗಳನ್ನು ಒಟ್ಟುಮಾಡುವ ಜತೆಗೆ ಕೃಷಿಕರಾದರೆ ಮುಂಗಾರಿ ಬಿತ್ತನೆ, ನಾಟಿ, ತೋಟದ ಕೆಲಸಗಳಿಗೆ ಬೇಕಾದ ನೇಗಿಲು-ನೊಗ, ಹಾರೆ-ಪಿಕಾಸಿ, ಗುದ್ದಲಿ, ಕುಳ, ಕುಂಟೆ, ಕೊಲ್ಡುಗಳ ತಯಾರಿ/ ಸಂಗ್ರಹದತ್ತ ಚಿತ್ತ ಹರಿಸುತ್ತಾರೆ.

ಹೆಂಗಳೆಯರು ಮಳೆಗಾಲದ ಚಳಿ ನಡುಕಕ್ಕೆ ಪೂರಕವಾಗಿ ದೇಹ ಮತ್ತು ಮನಸ್ಸನ್ನು ಉಲ್ಲಸಿತಗೊಳಿಸುವ ಖಾದ್ಯ ಪದಾರ್ಥಗಳ ಒಟ್ಟು ಮಾಡತೊಡಗುತ್ತಾರೆ. ಅವರ ಆಣತಿಯ ಮೇಲೆ ಜಾರು ಸೇರುವ, ಅಟ್ಟ ಏರುವ ಸರದಿಯಲ್ಲಿ ಹಪ್ಪಳ-ಸಂಡಿಗೆ, ಉಪ್ಪಿನಕಾಯಿ, ಹುಳಿ, ವಿವಿಧ ಕಾಳು-ಬೇಳೆಗಳು ಇರುತ್ತವೆ. ಜತೆಗೆ ಅಮ್ಮಂದಿರ ಕಾಳಜಿಯ ಇಷ್ಟಿಷ್ಟು ಕೂಡ. ಅಂತಹ ಚಿಕ್ಕಪುಟ್ಟ ಜತನದ ಮೂಲಕ ಹೆಂಗಳೆಯರು ಕಾಪಿಡುವುದು ಬರಿ ತಿನಿಸು- ಖಾದ್ಯಗಳನ್ನಷ್ಟೇ ಅಲ್ಲ, ಕುಟುಂಬವನ್ನು ಪೊರೆಯುವ ಪ್ರೀತಿ, ಮಮತೆಯನ್ನೂ. ಹಾಗಾಗಿ ಹಾಗೆ ಕೂಡಿಟ್ಟ ಎಲ್ಲವೂ ತಿಂಗಳ-ಕೆಲವೊಮ್ಮೆ ವರುಷ- ಬಳಿಕವೂ ನಳನಳಿಸುವ ಪ್ರೀತಿಯಂತೆಯೇ ತಾಜಾ ಆಗಿರುತ್ತವೆ!

ಇನ್ನು ಶಾಲೆಯ ಹುಡುಗರ ಪಾಲಿಗೆ ಮಳೆಗಾಲ ಎಂಬುದು ಅಪರಿಮಿತ ಕುತೂಹಲಗಳ ಕಾಲ. ಬರಿಗಾಲಿನಲ್ಲಿ ಒದ್ದೆ ನೆಲದ ಬೆಚ್ಚನೆ ಸ್ಪರ್ಶಕ್ಕೆ ಮೈಯೊಡ್ಡುತ್ತಾ ಮಣ್ಣಿನ ರಸ್ತೆಗಳಲ್ಲಿ ನಡೆದಾಡುವ ಪುಳಕಕ್ಕೆ ಇನ್ನಾವುದೂ ಸಮನಾಗದು. ದಾರಿಗುಂಟ ಬೆರಗುಗಣ್ಣಿಗೆ ಬೀಳುವ ಬಸವನಹುಳು, ಸಹಸ್ರಪದಿ, ಚಕ್ಕುಲು ಹುಳು, ಸಗಣಿ ಉಂಡೆಗಳನ್ನು ಉರುಳಿಸಿಕೊಂಡು ಹೋಗುವ ‘ಹರ್ಕ್ಯೂಲಸ್’ ಸಂಬಂಧಿ ಹುಳುಗಳು,… ಒಂದೇ-ಎರಡೆ ಜೀವ ಜಗತ್ತಿನ ವಿಸ್ಮಯದ ಜಾತ್ರೆ. ಕಂಡಷ್ಟೂ ಕಾಣುವುದು ಮಿಕ್ಕುವುದು. ಜತೆಗೆ ಸುರಿವ ಮಳೆಯ ನಡುವೆ ಒದ್ದೆಯಾಗುವ, ಕಾಲು ಸಂಕಗಳ ಮೇಲೆ ಆರಂಭದಲ್ಲಿ ಭಯದಿಂದ ತೆವಳುತ್ತಾ, ಬರುಬರುತ್ತಾ ಆಟವಾಡುವ  ದಾಟುವ ಮಜಾ… ಓಹೋ.. ಅದು ಕಿನ್ನರ ಲೋಕ!

ಇಂತಹ ಮಳೆಗಾಲ ಇತ್ತೀಚಿನ ದಿನಗಳಲ್ಲಿ ಕುತೂಹಲ, ಖುಷಿಗಿಂತ ಮಲೆನಾಡಿನ ಜನರ ಪಾಲಿಗೆ ಪ್ರವಾಹ, ನೆರೆಯ ಆತಂಕಕ್ಕೆ ಕಾರಣವಾಗುತ್ತಿದೆ. ನಿಸರ್ಗದ ಇಂತಹ ವೈಪರೀತ್ಯಕ್ಕೆ ನಾವೆಷ್ಟು ಹೊಣೆ. ಲೆಕ್ಕಾಚಾರ ಮೀರಿದ ಜಗದ ಬಗೆ ಎಷ್ಟು ಹೊಣೆ?

—-