ಮಳೆಯೋ ಮಳೆ ಎದೆಯೊಳಗೆ….

dropನೀರ ಮೇಲೆ ಅಲೆಯ ಉಂಗುರ…

ಅವಳ ಕಣ್ಣಿನ ತುಂಬ

ಮಿಂಚು ಮಿನುಗುವ ಬೆಳಕು…

ಹನಿಒಡೆದ ಬಳಿಕದ ಹೊಂಬಿಸಿಲ

ಎಸಳು ಕಿರುನಗೆಯ ಮಂದಲೆ.

ಅವನ ಕುಡಿನೋಟದ

ಸಿಡಿಲ ತಾಕಿದ ಕ್ಷಣ

ಪ್ರೀತಿಯ ಮಳೆ…. ಧೋ…

ಮಳೆ-ಮನಸ್ಸುಗಳ

ಪುಲಕ- ಮೈಯೊಳಗೆ!!

ಜೀವ ಪ್ರೀತಿಯ

ಘಳಿಗೆಗೆ ಹನಿಯ ಬೆಳಗು!!

2 Responses to “ಮಳೆಯೋ ಮಳೆ ಎದೆಯೊಳಗೆ….”

  1. Sindhu Says:

    ಶಶಿ,

    ತುಂಬ ಚೆನಾಗಿದೆ ಕವಿತೆ.

    ಜೀವ ಪ್ರೀತಿಯ ಘಳಿಗೆಗೆ ಹನಿಯ ಬೆಳಗು!!

  2. dinesh Says:

    nice…

Leave a Reply